ಆತ್ರೇಯ
ಅತ್ರಿ ಋಷಿಯ ಮಗ. ವಾಮದೇವ ಋಷಿಯ ಶಿಷ್ಯನಾಗಿ ಬ್ರಹ್ಮಜ್ಞಾನವನ್ನು ಪಡೆದ. ಜನಮೇಜಯ ಸರ್ಪಕುಲವನ್ನು ನಾಶಮಾಡಲು ಸರ್ಪಯಾಗವನ್ನು ಮಾಡುವ ಸಮಯದಲ್ಲಿ ಪುರೋಹಿತ ಸೋಮಶ್ರವನಿಗೆ ನೆರವಾದ ಯಜ್ಞ ಸದಸ್ಯರಲ್ಲಿ ಒಬ್ಬ. ವಿದುರನಿಗೆ ಜ್ಞಾನೋಪದೇಶ ಮಾಡಿದ ವೃತ್ತಾಂತ ಭಾಗವತದಲ್ಲಿ ಬರುತ್ತದೆ.					
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ